ಹೆಸರು : ವಿಷ್ಣು ಎಲ್ ಭಟ್,ಇಡಗುಂಜಿ,ಹೊನ್ನಾವರ,ತಾಲೂಕು,ಉತ್ತರ ಕನ್ನಡ ಜಿಲ್ಲೆ. ವಯಸ್ಸು : ೫೪ ವರ್ಷ (೧೧-೦೬-೧೯೫೮) ತಂದೆ : ಲಕ್ಷ್ಮೀನಾರಾಯಣ ವಿಷ್ಣು ಭಟ್,ಇಡಗುಂಜಿ ಮಹಾಗಣಪತಿ ದೇವರ ಪ್ರಧಾನ ಪರಂಪರಾಗತ ಅರ್ಚಕರು. == ವಿದ್ಯಾಭ್ಯಾಸ ಹಾಗೂ ಅಧ್ಯಯನ == ತೈತ್ತರೀಯ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಶ್ರೀ ಮೇಧಾ ದಕ್ಷಿಣಾಮೂರ್ತಿ ಚತುರ್ವೇದ ವೇದಭವನ ಮಹಾವಿದ್ಯಾಲಯ, ಗೋಕರ್ಣದಲ್ಲಿ-೮ವರ್ಷ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಆಗಮ ಅಭ್ಯಾಸ ೩ವರ್ಷ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಂ, ಕೇಂದ್ರೀಯ ವಿದ್ಯಾಪೀಠ ತಿರುಪತಿ ಶಿಕ್ಲ್ಷಾಶಾಸ್ತ್ರಿ -೧ವರ್ಷ. ದೆಹಲಿ ಮಹರ್ಷಿ ವೇದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಧ್ಯಾನ ಅಧ್ಯಯನ ಹಾಗೂ ವಿದ್ಯಾ ಪೀಠದಲ್ಲಿ ವೈದಿಕ ಪಂಡಿತ ಅಧ್ಯಾಪನ-೪ವರ್ಷ . == ಅರ್ಹತೆ == ವೇದ,ಶಾಸ್ತ್ರ ಪುರಾಣ,ಆಗಮ ಜ್ಯೋತಿಷ್ಯ ಔಪಚಾರಿಕ, ಅನೌಪಚಾರಿಕ ಶಿಕ್ಷಣ ಹಾಗೂ ಅದರ ಆಚರಣೆ ಬಗ್ಗೆ ವಿವರ ಅಲಂಕಾರ,ವ್ಯಾಕರಣ,ಜ್ಯೋತಿಷ್ಯ,ಧರ್ಮಶಾಸ್ತ್ರ,ವೇದಾಂತ ಮುಂತಾದ ಷಡಂಗಗಳ ಅಧ್ಯಯನ. == ಕಾರ್ಯಕ್ರಮಗಳು == ಇದುವರೆ ನೆಡೆಸಿದ ಸಾಮಾಜಿಕ,ಸಾಂಸ್ಕೃತಿಕ,ಧಾರ್ಮಿಕ ಪ್ರಮುಖ ಕಾರ್ಯಕ್ರಮಗಳು: ಭಗವದ್ಗೀತಾ ಅಭಿಯನ ಸ್ವರ್ಣವಲ್ಲಿ ಸರ್ವಜ್ಞೇಂದ್ರ ಸರಸ್ವತಿ ಸಂಸ್ಥಾನದವರ ಪ್ರಾಯೊಜಕತ್ವದಲ್ಲಿ ಹಾಗೂ ಮಂಗಲಕಾರ್ಯಗಳಾದ ವಿವಾಹ,ಉಪನಯನ,ಸಂಧಿಶಾಂತಿ, ಇತ್ಯಾದಿ ವೈದಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸಿ ತನ್ಮೂಲಕ ಸಾವಿರಾರು ಜನರ ಮನದಲ್ಲಿ ನೆಲೆಸಿದ್ದಾರೆ ಹಾಗೂ ಸಾವಿರಾರು ಜನೋಪಯೊಗಿ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ. ಸಂದ ಪ್ರಶಸ್ತಿ,ಪುರಸ್ಕಾರಗಳು, ಶ್ರೀ ಗುರು ಗಂಗೇಶ್ವರಾನಂದ ವೇದ ವೇದಾಂಗ ರಾಷ್ತ್ರೀಯ ಪುರಸ್ಕಾರ ೨೦೦೬ ನಾಸಿಕದ ಪರಶುರಾಮ ನಾಟ್ಯ ಮಂದಿರದಲ್ಲಿ. ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವದಲ್ಲಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳಿಂದ "ಅರ್ಚಕ ಅಭಿನಂದನಾ ಪ್ರಶಸ್ತಿ"೨೦೧೨. ಅಖಿಲ ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆ, ಧರ್ಮಶಾಸ್ತ್ರ ವಿಭಾಗದಲ್ಲಿ ಪ್ರಶಸ್ತಿ ೧೯೮೩. ಶ್ರೀ ರಾಮಚಂದ್ರ ಪುರಮಠ,ಸೀಮಾ ಪರಿಶತ್ ವತಿಯಿಂದ ಸನ್ಮಾನ ೨೦೦೮. ಮಲೆನಾಡು ಉತ್ಸವ ಕವಿಗೋಷ್ಠಿಯಲ್ಲಿ ಸನ್ಮಾನ ಗೇರುಸೊಪ್ಪ ಹೊನ್ನಾವರ ೨೦೦೮. ಹೆಬ್ಬೂರು ಮಠದ ಪುರಸ್ಕಾರ ತಲಗೋಡು ಹೊನ್ನಾವರ ೨೦೦೮. ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಿಂದ ಸನ್ಮಾನ ಇಡಗುಂಜಿ ಹೊನ್ನಾವರ ೨೦೦೭. ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ಬೆಂಗಳೂರಿನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ವತ್ ಸನ್ಮಾನ ೨೦೦೭-೦೮. ಇನ್ನುಹಲವಾರು ಪ್ರಶಸ್ತಿ ಪುರಸ್ಕಾ ರಗಳು ಲಭಿಸಿವೆ.